ಅಮೇಜಾನ್ ಪ್ರೈಮ್ ನಲ್ಲಿ ಲಭ್ಯವಿರುವ ಹಿಂದಿ ಕಾಮೆಡಿ ಸಿನೆಮಾಗಳು

ಕೆಲವೊಂದು ಜಾನರ್ ನ ಸಿನೆಮಾಗಳು ಎಷ್ಟೇ ಸಲ ವೀಕ್ಷಿಸಿದರೂ ಮತ್ತೇ ನೋಡಬೇಕಿಸುತ್ತವೆ ಮತ್ತು ಎಲ್ಲಿಯೂ ಬೋರ್ ಅನಿಸುವುದಿಲ್ಲ. ಅಂತಹ ಸಿನೆಮಾಗಳಲ್ಲಿ ಕಾಮೆಡಿ ಜಾನರ್ ಸಿನೆಮಾಗಳು ಪ್ರಮುಖವಾದವುಗಳು. ಈ ಲೇಖನದಲ್ಲಿ ನಾನು 2000 ದಿಂದ 2010ರ ಮಧ್ಯೆ ಬಿಡುಗಡೆಗೊಂಡ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿರುವ ಹಿಂದಿ ಸಿನೆಮಾಗಳ ಬಗ್ಗೆ ಬರೆಯುತ್ತಿದ್ದೇನೆ. ಈ ಲಿಸ್ಟ್ ನಲ್ಲಿರುವ ಸಿನೆಮಾಗಳಳಲ್ಲಿ ನಿಮ್ಮ ಮಚ್ಚಿನ ಸಿನೆಮಾ ಯಾವುದು  ಎಂದು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.


 7. ಅಪ್ನ ಸಪ್ನಾ ಮನಿ ಮನಿ

Comedy movie on Amazon prime


ಸಂಗೀತ್ ಸಿವನ್ ನಿರ್ದೇಶನದ ಅಪ್ನಾ ಸಪ್ನಾ ಮನಿ ಮನಿ ಸಿನೆಮಾ 2006 ರಲ್ಲಿ ತೆರೆಕಂಡಿತ್ತು. ಅನುಪಮ್ ಖೇರ್, ರಿತೇಶ್ ದೇಶ್ಮುಖ್, ಶ್ರೇಯಸ್ ತಲ್ಪಡೆ, ರಿಯಾ ಸೇನ್, ಸುನೀಲ್ ಶೆಟ್ಟಿ, ಸೆಲಿನಾ ಜೆಟ್ಲಿ ಮೊದಲಾದ ಮುಖ್ಯ ನಟರನ್ನು ಒಳಗೊಂಡ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ಮಾತ್ರ ಯಶಸ್ಸು ಕಾಣಲಿಲ್ಲ. ಆದರೂ ನಾನು ಈ ಸಿನೆಮಾವನ್ನು ನನ್ನ ಈ ಪಟ್ಟಿಯಲ್ಲಿ ಸೇರಿಸುತ್ತಿದ್ದೇನೆ ಯಾಕೆಂದ್ರೆ ಇದರ ಕಾಮೆಡಿ ದೃಶ್ಯಗಳಿಗಾಗಿ. ಈ ಸಿನೆಮಾವು ಒಂದು ಒಳ್ಳೆಯ ರೊಮ್ಯಾಂಟಿಕ್ ಕಾಮೆಡಿ ಕಥೆಯನ್ನು ಹೊಂದಿದೆ. ಸಿನೆಮಾದ ಸಾರಾಂಶವನ್ನು ನೋಡೋಣ, ಸಿನೆಮಾದಲ್ಲಿ ಸತ್ಯಬೊಲ್ ಶಾಸ್ತ್ರಿಯ ಮಗಳು ಶಿವಾನಿಯನ್ನು ಪಕ್ಕದ ಮನೆಯ ಮೆಕಾನಿಕ್ ಅರ್ಜುನ್ ಫೆರ್ನಾಂಡಿಸ್ ಪ್ರೀತಿಸುತ್ತಿರುತ್ತಾನೆ. ಅವರ ಧರ್ಮ ಬೇರೆ ಬೇರೆ ಆದ ಕಾರಣ ಶಾಸ್ತ್ರಿ ಅವರ ಪ್ರೀತಿಗೆ ಒಪ್ಪಿಗೆ ಕೊಡುವುದಿಲ್ಲ. ಆದ್ದರಿಂದ ಅರ್ಜುನ್ ಅವನ ಕಸಿನ್ ತಮ್ಮ ಕಿಶನ್ನ ಸಹಾಯ ಕೇಳುತ್ತಾನೆ. ಕಿಶನ್ ವೇಷ ಬದಲಾಯಿಸಿಕೊಂಡು ರೈಲಿನಲ್ಲಿ ಬರುವ ಸಮಯದಲ್ಲಿ ಬ್ಯಾಂಕಾಕ್ ಡಾನ್ ಒಬ್ಬನ ಸಹಾಯಕಿ ವಜ್ರ ತುಂಬಿದ ಸ್ಯಾಂಡಲ್ ಅನ್ನು ಕಿಶನ್ ನ ಬ್ಯಾಗ್ ನಲ್ಲಿ ಇಟ್ಟುರುತ್ತಾನೆ. ಆ ವಜ್ರಗಳಿಗಾಗಿ ಹುಡುಕಿಕೊಂಡು ಬರುವ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಸುನಿಲ್ ಶೆಟ್ಟಿಯವರು ನಟಿಸಿದ್ದಾರೆ. ಇವರ ಜೀವನದಲ್ಲಿ ಮುಂದೆ ನಡೆಯುವ ಘಟನೆಗಳೇ ಸಿನೆಮಾದ ಮುಖ್ಯ ಅಂಶ. ಈ ಸಿನೆಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ, ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.


6. ಆವಾರ ಪಾಗಲ್ ದೀವಾನ :

Comedy movie on Amazon prime


ವಿಕ್ರಮ್ ಭಟ್ ಅವರ ನಿರ್ದೇಶನದ  ಈ ಚಲನಚಿತ್ರ 2002ರಲ್ಲಿ ತೆರೆಕಂಡಿತ್ತು. ಇದು 2002ರಲ್ಲಿ ತೆರೆಕಂಡ ಅಮೆರಿಕನ್ ಕಾಮೆಡಿ ಚಿತ್ರ ‘ದ ಹೋಲ್ ನೈನ್ ಯಾರ್ಡ್’ ಚಿತ್ರದಿಂದ  ಪ್ರೇರಿತಗೊಂಡು ನಿರ್ಮಿಸಿದ ಚಿತ್ರವಾಗಿದೆ. ಚಿತ್ರದ ಮುಖ್ಯ ಕಥೆಯು ಇಂಡಿಯಾದ ಭೂಗತ ದೊರೆ ಬಲದೇವ್ ಪ್ರಸಾದ್ ನ ವಿಲ್ ನಲ್ಲಿ ಬರೆದಿರುವ 1000 ಕೋಟಿ ಬೆಲೆಬಾಳುವ ವಜ್ರದ ಸುತ್ತ ಸುತ್ತುತ್ತದೆ. ಅವನು ಆ ವಜ್ರಗಳನ್ನು ತನ್ನ ಮಗ, ಮಗಳು ಮತ್ತು ಅಳಿಯನಿಗೆ ಸಮವಾಗಿ ಹಂಚಿರುತ್ತಾನೆ. ಅವನ ಮಗ ಮತ್ತು ಅಳಿಯ ಮೊದಲಿನಿಂದಲೂ ಒಬ್ಬರನೊಬ್ಬರು ದ್ವೇಷಿಸುತ್ತಿರುತ್ತಾರೆ. ಅವರ ಮಧ್ಯೆ ವಜ್ರವನ್ನು ತಾನೆ ಪಡೆದುಕೊಳ್ಳಬೆಕೇಂಬ ಆಸೆ ಹುಟ್ಟುತ್ತದೆ. ಅದಕ್ಕಾಗಿ ಬಲದೇವನ ಮಗ ವಿಕ್ರಮ್ ತನ್ನ ಭಾವ ಗುರು ಗುಲಾಬ್ ಖತ್ರಿಯನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಗುರು ಗುಲಾಬ್ ಬಗ್ಗೆ ಮಾಹಿತಿ ನೀಡಿದವರಿಗೆ 2 ಕೋಟಿ ಬಹುಮಾನ ನೀಡುವುದಾಗಿ ವಿಕ್ರಮ್ ಘೋಷಿಸುತ್ತಾನೆ. ಈ ಮದ್ಯೆ ಅಮೆರಿಕಾದಲ್ಲಿದ್ದ ಗುರುವಿನ ಪಕ್ಕದ ಮನೆಯ ಡೆಂಟಿಸ್ಟ್ ಅನ್ಮೋಲ್ ತನ್ನ ಅತ್ತೆಯ ಬಲವಂತದಿಂದ ಗುರು ಗುಲಾಬ್ ಬಗ್ಗೆ ಮಾಹಿತಿ ನೀಡಲು ಇಂಡಿಯಾಗೆ ತನ್ನ ಮಾವನೊಂದಿಗೆ ಬರುತ್ತಾನೆ. ಅಲ್ಲಿ ಅವರಿಗೆ ಏಡ ಅನ್ನಾ ಮತ್ತು ಚೋಟ ಚತ್ರಿ ಸಿಗುತ್ತಾರೆ. ಅದರ ನಂತರ ನಡೆಯುವ ಕಥೆಯೇ ಚಿತ್ರದ ಮುಖ್ಯ ಜೀವಾಳ. ಸಿನೆಮಾದಲ್ಲಿ ಜಾನಿ ಲೀವರ್ ಮತ್ತು ಪರೇಶ್ ರಾವಲ್ ಅವರ ನಡುವೆ ನಡೆಯುವ ಸಂಭಾಷಣೆಗಳು, ಸುನಿಲ್ ಶೆಟ್ಟಿ ಮತ್ತು ಜಾನಿ ಲೀವರ್ ಮಧ್ಯೆ ನಡೆಯುವ ಸಂಭಾಷಣೆಗಳು ನಗು ತರಿಸುತ್ತವೆ. ಸಿನಿ ವಿಮರ್ಶಕರು ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿದರೂ, ಈ ಸಿನಮಾ ಒಂದು ಉತ್ತಮ ಹಿಂದಿ ಕಾಮೆಡಿ ಸಿನೆಮಾ. ಈ ಸಿನೆಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

 

5.ಗೋಲ್ ಮಾಲ್ ರಿಟರ್ನ್ಸ

Comedy movie on Amazon prime


ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್ಮಾಲ್ ಫಿಲ್ಮ ಸಿರೀಸ್ ನ ಎರಡನೇ ಭಾಗವಾದ ಈ ಹಿಂದಿ ಕಾಮೆಡಿ ಸಿನೆಮಾ 2008ರಲ್ಲಿ ತೆರೆಕಂಡಿತ್ತು.  ಗೊಲ್ ಮಾಲ್ ಸಿರೀಸ್ ಎಲ್ಲಾ ಸಿನೆಮಾಗಳು ಚೆನ್ನಾಗಿವೆ ಆದರೆ ನನಗೆ ಇಷ್ಟವಾದ ಸಿನೆಮಾ ಇದು. ಇದರಲ್ಲಿ ಬರುವ ದೃಶ್ಯಗಳು, ಸಂಭಾಷಣೆಗಳು ತುಂಬಾ ಚೆನ್ನಾಗಿದೆ. ನಾನು ಇದನ್ನು ಹಲವು ಭಾರಿ ನೋಡಿದ್ದೇನೆ ಎಲ್ಲೂ ಬೋರ್ ಅನಿಸುವುದಿಲ್ಲ. ಈಗ ಚಿತ್ರದ ಕಥೆಯ ಬಗ್ಗೆ ಸ್ವಲ್ಪ ಹೇಳುತ್ತೇನೆ, ಚಿತ್ರದಲ್ಲಿ ಗೋಪಾಲ್ (ಅಜಯ್ ದೇವ್ಗನ್) ಗೋವಾದಲ್ಲಿ ತನ್ನ ಹೆಂಡತಿ, ತಂಗಿ ಮತ್ತು ಹೆಂಡತಿಯ ತಮ್ಮನ ಜೊತೆ ವಾಸವಾಗಿರುತ್ತಾನೆ. ಒಂದು ದಿನ ಅವನು ತನ್ನ ಆಫಿಸಿನಿಂದ ವಾಪಾಸ್ ಬರುವಾಗ ಒಬ್ಬಳು ಹುಡುಗಿಯನ್ನು ಗುಂಡಾಗಳಿಂದ ಬಚಾವ್ ಮಾಡುತ್ತಾನೆ. ಅವರ ಗಾಡಿ ಕೆಟ್ಟು ಹೋದ ಕಾರಣ ಅವಳನ್ನು ಕರೆದಕೊಂಡು ತನ್ನ ಗೆಳಯನ ಯಾಚ್ ಗೆ ಹೋಗುತ್ತಾನೆ. ಅವನ ಹೆಂಡತಿ ಏಕ್ತಾ (ಕರೀನಾ ಕಪೂರ್) ಮರುದಿನ ರಾತ್ರಿ ಎಲ್ಲಿದ್ದಿ ಎಂದು ವಿಚಾರಿಸಿದಾಗ ಅವಳ ಸಂಶಯ ಪಡುವ ಗುಣದ ಕಾರಣ ಗೆಳಯ ಆಂಟನಿಯ ಜೊತೆ ಇದ್ದೆ ಎಂದು ಸುಳ್ಳು ಹೇಳುತ್ತಾನೆ. ಅದು ಯಾರು ಏನು ಎಂದು ಸಂಪೂರ್ಣವಾಗಿ ವಿಚಾರಿಸಿದ ಏಕ್ತಾ ಗೋಪಾಲ್ ನ ಗೆಳೆಯನಿಗೆ ಪತ್ರ ಬರೆದು ಬರಲು ಹೇಳುತ್ತಾನೆ. ಈ ವಿಷಯ ಗೊತ್ತಾದ ಗೋಪಾಲ್ ತನ್ನ ಕಂಪನಿಗೆ ಹೊಸದಾಗಿ ಸೇರಲು ಬಂದ ಲಕ್ಷ್ಮಣ್ ಪ್ರಸಾದ್( ಶ್ರೇಯಸ್ ತಲ್ಪಡೆ)ನನ್ನು ಆಟಂನಿಯಾಗಿ ನಟಿಸುವಂತೆ ತಿಳಿಸುತ್ತಾನೆ. ಇದರ ನಂತರ ನಡೆಯುವ ಘಟನೆಗಳು ಸಿನೆಮಾದ ಮುಖ್ಯ ಅಂಶ. ಸಿನೆಮಾದ ದೃಶ್ಯಗಳು ಮತ್ತು ಸಂಭಾಷಣೆಗಳು ಹಾಸ್ಯದಿಂದ ಕೂಡಿದ್ದು ನೀವು ಈ ಸಿನೆಮಾವನ್ನು ಕಂಡಿತಾ ಇಷ್ಟ ಪಡುತ್ತೀರಿ. ಈ ಸಿನೆಮಾ ಕೂಡಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ  ಲಭ್ಯವಿದೆ.


4. ಮುನ್ನಾ ಬಾಯಿ ಎಂ.ಬಿ.ಬಿ.ಎಸ್.

Comedy movie on Amazon prime


ರಾಜ್ ಕುಮಾರ್ ಹಿರಾನಿ ನಿರ್ದೇಶನದ ಮೊದಲ ಚಿತ್ರವಾದ ಮುನ್ನಾ ಭಾಯಿ ಎಂ.ಬಿ.ಬಿ.ಎಸ್. ಚಿತ್ರವು 2003ರಲ್ಲಿ ತೆರೆ ಕಂಡಿತ್ತು. ಸಂಜಯ್ ದತ್ (ಮುನ್ನಾ), ಬೋಮನ್ ಇರಾನಿ( ಡಾ. ಅಸ್ಥಾನ), ಆರ್ಶದ್ ವಾರ್ಸಿ (ಸರ್ಕಿಟ್), ಗ್ರೇಸಿ ಸಿಂಗ್ (ಡಾ. ಸುಮನ್) ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಸಿನೆಮಾ ಅತ್ಯಂತ ಮೆಚ್ಚುಗೆ  ಪಡೆದು ಬಾಕ್ಸ್ ಆಫಿಸ್ ನಲ್ಲಿ ಕಂಡಿತ್ತು. ಚಿತ್ರದ ಮುಖ್ಯ ಕಥೆಯ ಬಗ್ಗೆ ಹೇಳಬೇಕೆಂದರೆ, ಮುರಳೀಪ್ರಸಾದ್ ಶರ್ಮಾ ಅಲಿಯಾಸ್ ಮುನ್ನಾ ತನ್ನ ತಂದೆಗಾಗಿ ತಾನೊಬ್ಬ ಡಾಕ್ಟರ್ ಎಂದು ಸುಳ್ಳು ಹೇಳಿರುತ್ತಾನೆ. ಒಂದು ದಿನ ಅವನ ತಂದೆಯ ಹಳೆಯ ಗೆಳೆಯ ಡಾ. ಅಸ್ತಾನ, ಮುನ್ನಾ ಹೇಳಿದ ಈ ಸುಳ್ಳನ್ನು ತಂದೆಯ ಮುಂದೆ ಎಕ್ಸಪೋಸ್ ಮಾಡುತ್ತಾನೆ. ಇದರಿಂದ ಮುನ್ನಾನ ತಂದೆಯ ಮನಸ್ಸಿಗೆ ನೋವಾಗುತ್ತದೆ. ಹಾಗಾಗಿ ಮುನ್ನಾ ತಾನು ಡಾಕ್ಟರ್ ಆಗಬೇಕು ಎಂದು ನಿರ್ಧರಿಸಿ ಮುಂಬೈಯ ಅತ್ಯುತ್ತಮ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಪಡೆದುಕೊಳ್ಳುತ್ತಾನೆ. ನಂತರ ಅವನಿಗೆ ಅದು ಡಾ. ಅಸ್ತಾನ ಡೀನ್ ಆಗಿರುವ ಕಾಲೇಜು ಎಂದು ತಿಳಿಯುತ್ತದೆ. ಅದರ ನಂತರ ಕಾಲೇಜಿನಲ್ಲಿ ನಡೆಯುವ ಘಟನೆಗಳು ಸಿನೆಮಾದ ಮುಖ್ಯ ಅಂಶ. ಈ ಸಿನೆಮಾದಲ್ಲಿ ಕೇವಲ ಹಾಸ್ಯ ಮಾತ್ರವಲ್ಲದೆ  ಪ್ರೀತಿ, ಇಮೋಷನಲ್ ದೃಶ್ಯಗಳನ್ನೊಳಗೊಂಡ ಮಿಶ್ರಣವಿದೆ. ಈ ಹಿಂದಿ ಸಿನೆಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.


3. ಭಾಗಮ್ ಭಾಗ್

Comedy movie on Amazon prime


ಪ್ರಿಯದರ್ಶನ್ ಅವರು ನಿರ್ದೇಶಿಸಿದ ಈ ಸಿನೆಮಾವು 2006ರಲ್ಲಿ ತೆರೆ ಕಂಡಿತ್ತು. ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್, ಗೋವಿಂದ, ಪರೇಶ್ ರಾವಲ್, ಲಾರಾ ದತ್ತ, ಜಾಕಿ ಶ್ರಾಫ್, ರಾಜ್ ಪಾಲ್ ಯಾದವ್ ಅಭಿನಯಿಸಿದ್ದರು. ಈ ಸಿನೆಮಾ ಒಂದು ಕಾಮೆಡಿ ಪ್ಲಸ್ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಎಂದು ಹೇಳಬಹುದು. ಇದರಲ್ಲಿ ಹಾಸ್ಯದ ಜೊತೆಗೆ ಸಸ್ಪೆನ್ಸ್ ನ ಮಿಶ್ರಣವಿದೆ. ಈ ಚಿತ್ರದ ಕೆಲವು ದೃಶ್ಯಗಳನ್ನು ಮಲಯಾಳಂ ನ ಮನ್ನರ್ ಮಥೈ ಸ್ಪೀಕಿಂಗ್ ಸಿನಿಮಾದಿಂದ ಆಯ್ದುಕೊಳ್ಳಲಾಗಿದೆ. ಸಿನೆಮಾದ ಕಥೆಯ ಬಗ್ಗೆ ಹೇಳಬೇಕೆಂದರೆ, ಬಾಬ್ಲ (ಗೋವಿಂದ) ಮತ್ತು ಬಂಟಿ ( ಅಕ್ಷಯ್ ಕುಮಾರ್) ಇವರಿಬ್ಬರು ಚಂಪಕ್ ಚತುರ್ವೇದಿಯ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಅವರ ಕಂಪನಿಗೆ ಒಂದು ತಿಂಗಳ ಮಟ್ಟಿಗೆ ಲಂಡನಿನಲ್ಲಿ ನಾಟಕ ಮಾಡುವ ಆಫರ್ ಬರುತ್ತದೆ. ಅದರಂತೆ ಅವರು ಲಂಡನಿಗೆ ತೆರಳುತ್ತಾರೆ ಆದರೆ ಬಾಬ್ಲ ಮತ್ತು ಬಂಟಿಯ ಕಾರಣದಿಂದ ಅವರ ನಾಟಕದ ನಾಯಕಿ ಲಂಡನಿಗೆ ಬರುವುದಿಲ್ಲ. ಅವರು ಲಂಡನಿನಲ್ಲಿಯೇ ಯಾರನ್ನಾದರೂ ನಾಯಕಿಯಾಗಿ ಆಯ್ಕೆ ಮಾಡುವುದೆಂದು ನಿರ್ಧರಿಸಿ ಲಂಡನ್ ತಲುಪುತ್ತಾರೆ. ಅವರು ಅಲ್ಲಿ ನಾಯಕಿಯನ್ನು ಹುಡುಲು ಪಡುವ ಪಾಡು, ನಾಯಕಿ ಮುನ್ನಿ (ಲಾರಾ ದತ್ತಾ) ಸಿಕ್ಕಿದ ನಂತರ ನಡೆಯುವ ಅವಂತಾರಗಳು, ಮುನ್ನಿ ಆತ್ಮಹತ್ಯೆಯ ನಡೆಯುವ ಘಟನೆಗಳು ನಗು ತರಿಸುತ್ತವೆ. ಪರೇಶ್ ರಾವಲ್, ಅಕ್ಷಯ್ ಕುಮಾರ್, ಗೋವಿಂದ ನಡುವಿನ ಸಂಭಾಷಣಗೆ ಅತ್ಯಂತ ಹೆಚ್ಚು ನಗು ತರಿಸುವ ದೃಶ್ಯಗಳಾಗಿವೆ. ಈ ಚಿತ್ರವನ್ನು ನೀವು ನೋಡಿಲ್ಲವಾದಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಇಂದೇ ನೋಡಿ.


2. ಧಮಾಲ್

Comedy movie on Amazon prime


ಇಂದ್ರ ಕುಮಾರ್ ನಿರ್ದೇಶನದ 2007ರಲ್ಲಿ ತೆರೆ ಕಂಡ ಧಮಾಲ್ ಸಿನೆಮಾವು 2001ರಲ್ಲಿ ರಿಲೀಸ್ ಆದ ಅಮೆರಿಕನ್ ಕಾಮೆಡಿ ಸಿನೆಮಾ ರಾಟ್ ರೇಸ್ ಸಿನಮಾವನ್ನು ಆಧರಿಸಿ ನಿರ್ಮಾಣಗೊಂಡ ಸಿನೆಮಾ. ಈ ಹಿಂದಿ ಕಾಮೆಡಿ ಸಿನೆಮಾದಲ್ಲಿ ಸಂಜಯ್ ದತ್ತ್, ಆರ್ಶದ್ ವಾರ್ಸಿ, ಜಾವೆದ್ ಜಾಫ್ರಿ, ಆಶಿಶ್ ಚೌದರಿ, ಮುರಳಿ ಶರ್ಮ, ಸಂಜಯ್ ಮಿಶ್ರಾ ಮೊದಲಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರೊಯ್ (ರಿತೇಶ್ ದೇಶ್ಮುಖ್), ಆದಿ (ಆರ್ಶದ್ ವಾರ್ಸಿ), ಮಾನವ್ (ಜಾವೆದ್ ಜಾಫ್ರಿ), ಬೊಮನ್ (ಆಶಿಶ್ ಚೌಧರಿ) ನಾಲ್ಕು ಜನ ಗೆಳೆಯರು. ಒಂದು ದಿನ ಅವರು ಜೊತೆಯಾಗಿ ಇರುವಾಗ ರಸ್ತೆಯಲ್ಲಿ ಕಾರೊಂದು ಅಪಘಾತಕ್ಕೀಡಗುತ್ತದೆ. ಅದರಲ್ಲಿದ್ದ ವ್ಯಕ್ತಿ ಬೋಸ್ ಈ ನಾಲ್ಕು ಜನ ಗೆಳೆಯರಿಗೆ 10 ಕೋಟಿ ರೂಪಾಯಿಯನ್ನು ಬಚ್ಚಿಟ್ಟಿರುವ ಸ್ಥಳದ ಮಾಹಿತಿಯನ್ನು ನೀಡಿ ಸಾಯುತ್ತಾನೆ. ಅದೇ ಮಾಹಿತಿಗಾಗಿ ಬೋಸನ್ನು ಹುಡುಕುತ್ತಿದ್ದ ಪೋಲಿಸ್ ಅಧಿಕಾರಿ ಕಭೀರ್ (ಸಂಜಯ್ ದತ್) ಈ ನಾಲ್ಕು ಜನರ ಬಳಿ ವಿಚಾರಣೆ ಶುರುಮಾಡುತ್ತಾನೆ. ಕೊನೆಗೆ ಅವರೆಲ್ಲರೂ ಸೇರಿ ನಿಧಿಯನ್ನು ಸಮವಾಗಿ ಹಂಚಿಕೊಳ್ಳುವ ನಿರ್ಧಾರ ಮಾಡುತ್ತಾರೆ. ಆದರೆ ಒಬ್ಬರ ಪಾಲಿಗೆ ಎಷ್ಟು ಹಣ ಬರುತ್ತದೆ ಎಂಬ ಲೆಕ್ಕಾಚಾರದ ವಿಷಯದಲ್ಲಿ ಜಗಳ ನಡೆದು ಅವರು ಒಬ್ಬೊಬ್ಬರೇ ಹೋಗಿ ಖಜಾನೆಯನ್ನು ತೆಗೆದುಕೊಳ್ಳುವುದಾಗಿ ನಿರ್ಧರಿಸುತ್ತಾರೆ. ಅಲ್ಲಿಂದ ಅವರು ಖಜಾನೆ ಇರುವ ಜಾಗಕ್ಕೆ ಹೋಗುವ ಜರ್ನಿಯೇ ಸಿನೆಮಾದ ಕಥೆ. ಈ ಸಿನಮಾ ನಿಮಗೆ 100% ಇಷ್ಟ ಆಗಿಯೇ ಆಗುತ್ತೆ. ಇದರ ದೃಶ್ಯಗಳು, ಸಂಭಾಷಣೆಗಳು ಎಂತವರಿಗೂ ನಗು ತರಿಸುತ್ತವೆ. ಈ ಸಿನೆಮಾವನ್ನು ಅಮೇಜಾನ್ ಪ್ರೈಮ್ ವಿಡಯೋದಲ್ಲಿ ನೋಡಿ ಆನಂದಿಸಿ.


1. ಫಿರ್ ಹೇರಾ ಫೇರಿ

Comedy movie on Amazon prime


ಹಿಂದಿ ಕಾಮೆಡಿ ಸಿನಿಮಾಗಳ ಬರೆಯುವಾಗ ಫಿರ್ ಹೇರಾ ಫೇರಿ ಸಿನೆಮಾದ ಬಗ್ಗೆ ಬರೆಯದಿದ್ದರೆ ಆದೀತೆ ? ಮಿಮ್ ಗಳಲ್ಲಿ ಅತ್ಯಂತ ಹೆಚ್ಚು ಪೇಮಸ್ ಆಗಿರುವುದು ಈ ಸಿನೆಮಾದ ಮೀಮ್ ಗಳು. ಇದರ ಒಂದೊಂದು ದೃಶ್ಯಗಳು, ಸಂಭಾಷಣಗಳು ಕೂಡಾ ನಗು ತರಿಸುತ್ತವೆ. ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿ ನಟಿಸಿದ ಈ ಚಿತ್ರ 2006ರಲ್ಲಿ ತೆರ ಕಂಡಿತ್ತು. ಇದರ ಮುಖ್ಯ ಕಥೆಯು ಲಾಕ್, ಸ್ಟಾಕ್ ಆಂಡ್ ಟು ಸ್ಮೋಕಿಂಗ್ ಬ್ಯಾರಲ್ ಸಿನೆಮಾದ ಕಥೆಯಿಂದ ಪ್ರೇರಿತವಾಗಿದೆ. ಈ ಸಿನೆಮಾವು ಬಾಕ್ಸ್ ಆಫಿಸ್ ಉತ್ತಮ ಯಶಸ್ಸನ್ನು ಕಂಡಿದೆ. ಚಿತ್ರದ ಕಥೆಯು ರಾಜು(ಅಕ್ಷಯ್ ಕುಮಾರ್), ಶ್ಯಾಮ್ (ಸುನೀಲ್ ಶೆಟ್ಟಿ), ಬಾಬು ರಾವ್ ( ಪರೇಶ್ ರಾವಲ್) ಇವರನ್ನು ಕೇಂದ್ರಿಕರಿಸುತ್ತದೆ. ಈ ಮೂವರೂ ತಮ್ಮ ಬಂಗಲೆಯಲ್ಲಿ ಐಷರಾಮಿ ಜೀವನ ಸಾಗಿಸುತ್ತಿರುತ್ತಾರೆ. ಈ ಸಮಯದಲ್ಲಿ ರಾಜುವಿಗೆ 21ದಿನಗಳಲ್ಲಿ ಹಣವನ್ನು ಡಬಲ್ ಮಾಡುವ ಸ್ಕೀಮ್ ಬಗ್ಗೆ ತಿಳಿಯುತ್ತದೆ. ಇದು ಮೋಸ ಎಂದು ತಿಳಿಯದೆ ಈ ಮೂವರೂ ತಮ್ಮ ಎಲ್ಲಾ ಹಣವನ್ನು ಮತ್ತು ಪಪ್ಪು (ರಾಜ್ ಪಾಲ್ ಯಾದವ್)ನಿಂದ ಪಡೆದುಕೊಂಡ ಹಣವನ್ನು ಸ್ಕೀಮ್ ನಲ್ಲಿ ಹೂಡುತ್ತಾರೆ. 21 ದಿನಗಳ ನಂತರ ಅವರಿಗೆ ಈ ಮೋಸದ ಬಗ್ಗೆ ಅರಿವಾಗುತ್ತದೆ. ಎಲ್ಲವನ್ನು ಕಳೆದುಕೊಂಡು ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡಲು ಶುರುಮಾಡುತ್ತಾರೆ. ಒಂದು ದಿನ ರಾಜು ಪಕ್ಕದ ಮನೆಯವರು ಕಳ್ಳಮಾಲನ್ನು ತರುವ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾನೆ. ನಂತರ ಮೂವರೂ ಸೇರಿ ಆ ಕಳ್ಳಮಾಲನ್ನು ಕದಿಯುವ ಯೋಜನೆ ಹಾಕುತ್ತಾರೆ. ಅವರು ಅದಕ್ಕಾಗಿ ಪಡುವ ಪಾಡು, ನಂತರ ನಡೆಯುವ ಘಟನೆಗಳು ತುಂಭಾ ಹಾಸ್ಯಭರಿರವಾಗಿದೆ. ಸಿನೆಮಾ ಸಂಭಾಷಣೆ ಪರೇಶ್ ರಾವಲ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿಯವರ ನಡುವಿನ ಸಂಭಾಷಣೆ, ಜಾನಿ ಲೀವರ್ ಅವರ ನಟನೆ ಎಲ್ಲವೂ ಸಿನೆಮಾದ ಪ್ಲಸ್ ಪಾಯಿಂಟ್ ಎಂದು ಹೇಳಬಹುದು. ಈ ಸಿನೆಮಾ ಕೂಡಾ ಅಮೇಜಾನ್ ಪ್ರೈ,ಮ್ ವಿಡಿಯೋದಲ್ಲಿ ಲಭ್ಯವಿದೆ.



Comments