Kotigobba 3 Review in Kannada

 

Kotigobba 3

ಕೋಟಿಗೊಬ್ಬ 3 ಸಿನೆಮಾ, ಲೇಟಾದರೂ ಲೇಟೆಸ್ಟಾಗಿ ಎಂಟ್ರಿ ಕೊಟ್ಟ ಈ ಸಿನೆಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನೆಮಾದ ಕಥೆಯ ಬಗ್ಗೆ ಜಾಸ್ತಿ ಹೇಳೊಕೆ ಹೋದ್ರೆ ಸಿನೆಮಾ ನೋಡುವ ಮಜ ಹೊರಟು ಹೋಗುತ್ತೆ ಹಾಗಾಗಿ ಕಥೆಯ ಬಗ್ಗೆ ನಾನು ಜಾಸ್ತಿ ಹೇಳಲು ಹೋಗುವುದಿಲ್ಲ. ಕೋಟಿಗೊಬ್ಬ 2 ಸಿನೆಮಾದ ಮುಂದುವರಿದ ಭಾಗ ಆದ್ದರಿಂದ ಹಿಂದಿನ ಸರಣಿಯಲ್ಲಿ ಇದ್ದ ಕಥೆಯನ್ನು ಇಲ್ಲೂ ಮುಂದುವರಿಸಿದ್ದಾರೆ. ಸತ್ಯ ಮತ್ತು ಶಿವನ ಪಾತ್ರದ ಜೊತೆಗೆ ಘೋಸ್ಟ್ ಎನ್ನುವ ಇನ್ನೊಂದು  ಪಾತ್ರವನ್ನು ಕಿಚ್ಚ ಸುದೀಪ್ ಅವರು ಇಲ್ಲಿ ನಿರ್ವಹಿಸಿದ್ದಾರೆ. ಸತ್ಯ ಶಿವ ಇಬ್ಬರಾ ಅಥವಾ ಒಬ್ಬನೇನಾ ಎನ್ನುವ ಕಥೆಯೊಂದಿಗೆ ಈ ಘೋಸ್ಟ್ ಯಾರು ಅವನಿಗೂ ಸತ್ಯನಿಗೂ ಏನು ಸಂಬಂಧ? ಅಥವಾ ಸತ್ಯಾನೇ ಘೋಸ್ಟ್ ಆಗಿದ್ದಾನಾ ?  ಎನ್ನುವುದು ಸಿನೆಮಾದ ಕಥೆ. ಘೋಸ್ಟ್ ಪಾತ್ರಕ್ಕೆ ಸ್ವಲ್ಪ ನೆಗೆಟಿವ್ ಶೇಡ್ ಇದ್ದು ಹಿಂದಿನ ಸರಣಿ ಸತ್ಯ ಮತ್ತು ಶಿವನ ಪಾತ್ರದ ನೆನಪು ಮಾಡುತ್ತೆ. ಅಫ್ತಬ್ ಹಾಗೂ ಶ್ರದ್ದಾ ದಾಸ್ ಅವರ ಇಂಟರ್ ಪೋಲ್ ಆಫಿಸರ್ ಪಾತ್ರ, ಶೋಬರಾಜ್ ಅವರ ಪೋಲಿಸ್ ಪಾತ್ರ ಚೆನ್ನಾಗಿ ಮೂಡಿಬಂದೆ. ಸಿನೆಮಾದಲ್ಲಿ ರವಿಶಂಕರ್ ಅವರ “ಕಿಶೋರ್” ಪಾತ್ರ ಇಲ್ಲೂ ಮುಂದುವರಿದಿದ್ದೂ ಈ ಬಾರಿ ಅವರ ಪಾತ್ರಕ್ಕೆ ಕಾಮೆಡಿ ಟಚ್ ಕೊಡಲಾಗಿದ್ದು ತುಂಬಾ ಮಜವಾಗಿದೆ. ಕಿಚ್ಚ ಸುದೀಪ್ ಹಾಗೂ ರವಿಶಂಕರ್ ಅವರ ಜೊತೆಗಿನ ದೃಶ್ಯಗಳು , ಡೈಲಾಗ್‌ಗಳು ನಗು ತರಿಸುತ್ತವೆ. ನಾಯಕಿಯಾಗಿ ಮಡೊನಾ ಸೆಬಾಸ್ಟಿನ್ ಅವರ ನಟನೆಯೂ ಅದ್ಬುತವಾಗಿ ಮೂಡಿ ಬಂದಿದೆ. ಪೋಲ್ಯಾಂಡ್‌ನಲ್ಲಿ ನಡೆಯುವ ಚೇಸಿಂಗ್ ದೃಶ್ಯಗಳು, ಸಾಹಸಗಳು ಸಿನೆಮಾಗೆ ಹಾಲಿವುಡ್ ಟಚ್ ನೀಡುತ್ತವೆ. ಅರ್ಜುನ್ ಜನ್ಯಾ ಅವರು ಕಂಪೋಸ್ ಮಾಡಿದ ಸಿನೆಮಾದ ಸಾಂಗುಗಳು ಈಗಾಗಲೇ ಹಿಟ್ ಆಗಿದ್ದು, ನೀ ಕೋಟಿಯಲಿ ಒಬ್ಬನೆ, ಪಟಾಕಿ ಪೊರಿಯೊ ಸಾಂಗ್ ತುಂಬಾ ಚೆನ್ನಾಗಿದೆ. ಒಟ್ಟಿನಲ್ಲಿ ಕೋಟಿಗೊಬ್ಬ ಸಿನೆಮಾ ಪೈಸಾ ವಸೂಲ್ ಸಿನೆಮಾ ಅಂದರೆ ತಪ್ಪಾಗಲ್ಲ.

Comments