How to delete Facebook account in Kannada

ಹಾಯ್ ಗೆಳೆಯರೆ ಈವತ್ತು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲಿರುವ ವಿಷಯ ಫೇಸ್‌ಬುಕ್‌ನ ಅಕೌಂಟನ್ನು ಹೇಗೆ ಡಿಲೀಟ್ ಮಾಡಬಹುದು ಎಂಬ ವಿಷಯ. ಫೇಸ್‌ಬುಕ್‌ನಲ್ಲಿ ಅಕೌಂಟ್ ಮಾಡುವುದು ಮತ್ತು ಅದನ್ನು ಡಿಲೀಟ್ ಮಾಡುವುದು ಬಹಳಷ್ಟು ಮಂದಿಗೆ ಇನ್ನೂ ತಿಳಿದಿಲ್ಲ. ಇತ್ತೀಚಿಗೆ ನನ್ನ ಗೆಳೆಯನೊಬ್ಬ ತನ್ನ ಫೇಸ್‌ಬುಕ್ ಅಕೌಂಟನ್ನು ಡಿಲೀಟ್ ಮಾಡಿ ಕೊಡುವಂತೆ ಹೇಳಿ ಫೇಸ್‌ಬುಕ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ ಆಗ ನನಗೆ ಅನಿಸಿತು ಈ ಬಗ್ಗೆ ಏನಾದರೂ ಮಾಡಬೇಕು ಎಂದು ಅದಕ್ಕಾಗಿ ನಾನು ನನ್ನ ಯೂಟ್ಯೂಬ್ ಚಾನೆಲ್ "Kumar Speaking”ನಲ್ಲಿ ವಿಡಿಯೋ ಮಾಡಿದ್ದೆ. ಹಾಗೇ ಅದರ ಬರಹ ರೂಪವನ್ನು ನನ್ನ ಬ್ಲಾಗಿನಲ್ಲಿ ಬರೆಯೋಣ ಎಂದೆನಿಸಿ ಈ ಲೇಖನ ಬರೆಯುತ್ತಿದ್ದೇನೆ. ಸರಿ ಹಾಗಾದರೆ ಈಗ ನೇರ ವಿಷಯಕ್ಕೆ ಬರೋಣ,

ಮೊದಲನೆಯದಾಗಿ ನಿಮ್ಮ ಫೇಸ್‌ಬುಕ್ ಅಕೌಂಟ್‌ಗೆ ಲಾಗಿನ್ ಆಗಿ ನಂತರ ಬಲ ಬದಿಯಲ್ಲಿರುವ ಆಪ್ಷನ್ ಅನ್ನು ಆಯ್ಕೆ ಮಾಡಿ. ಆಪ್ಷನ್ ಮೆನುವಿನಲ್ಲಿ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ.

ನಂತರ Account Ownership Control ಆಪ್ಷನ್ ಅನ್ನು ಈ  ಕೆಳಗಿನಂತೆ ಆಯ್ಕೆ  ಮಾಡಬೇಕು.

ಈ ಕೆಳಗಿನ ಆಪ್ಷನ್‌ಗಳು ಕಾಣಸಿಗುತ್ತದೆ. ಇಲ್ಲಿ Deactivate or delete ಆಪ್ಷನ್ ಆಯ್ಕೆ ಮಾಡಬೇಕು.

ನಂತರ ಎರಡು ಆಯ್ಕೆಗಳು ಕಾಣಸಿಗುತ್ತದೆ ಅದರಲ್ಲಿ Delete Account ಅನ್ನು ಆಯ್ಕೆ ಮಾಡಿ continue ಆಯ್ಕೆ ಮಾಡಬೇಕು.
 ಈ ಕೆಳಗಿನ ಪೇಜ್ ಓಪನ್ ಆಗುತ್ತೆ ಈ  ಪೇಜ್‌ನಲ್ಲಿ ಕಂಟಿನ್ಯೂ ಮಾಡಿ
ಈ ಕೆಳಗಿನ ಪೇಜ್‌ನಲ್ಲಿ ಡಿಲೀಟ್ ಅಕೌಂಟ್ ಆಯ್ಕೆ ಮಾಡಿ
ನಿಮ್ಮ ಫೇಸ್‌ಬುಕ್ ಪಾಸ್‌ವರ್ಡ್ ಇಲ್ಲಿ ನಮೂದಿಸಿ ಕಂಟಿನ್ಯೂ ಕೊಡಬೇಕು.
ಕೊನೆಯದಾಗಿ ಅಕೌಂಟನ್ನು ಡಿಲೀಟ್ ಮಾಡುವ ಬಗ್ಗೆ ಆಯ್ಕೆ ಕಂಡುಬರುತ್ತದೆ ಇಲ್ಲಿ ಡಿಲೀಟ್ ಅಕೌಂಟ್ ಆಯ್ಕೆ ಮಾಡಿ ನಿಮ್ಮ ಫೇಸ್‌ಬುಕ್ ಅಕೌಂಟ್ ಶಾಶ್ವತವಾಗಿ ಡಿಲೀಟ್ ಆಗುತ್ತದೆ.
  • Facebook account deletion

ಈ ರೀತಿ ನೀವು ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬಹುದು.


Comments