How to Create Google Ad Explained in Kannada

 ಹಾಯ್ ಗೆಳೆಯರೆ, ನೀವು ಯೂಟ್ಯೂಬ್ ಚಾನೆಲ್ ಹೊಂದಿದ್ದೀರಾ ? ಅಥವಾ ಬ್ಲಾಗ್ ಹೊಂದಿದ್ದೀರಾ ನಿಮ್ಮ ಯೂಟ್ಯೂಬ್ ಚಾನೆಲ್ ಹೊಸದಾಗಿದ್ದಲ್ಲಿ ನಿಮ್ಮ ವಿಡಿಯೋಗಳು ಸಾಕಷ್ಟು ಜನರಿಗೆ ತಲುಪುವುದು ಸ್ವಲ್ಪ ತಡವಾಗಬಹುದು ಅದಕ್ಕಾಗಿ ನೀವು ನಿಮ್ಮ ಚಾನಲ್ ಅನ್ನು ಜಾಹಿರಾತಿನ ಮೂಲಕ ಹೆಚ್ಚು ಜನರಿಗೆ ತಲುಪಿಸಬಹುದಾಗಿದೆ. ಹೌದು ಇದಕ್ಕಾಗಿ ನೀವು ಗೂಗಲ್ ಆ್ಯಡ್‌ವರ್ಡ್ಸ್ ಅಥವಾ ಗೂಗಲ್ ಆ್ಯಡ್ ಮೂಲಕ ನಿಮ್ಮ ವಿಡಿಯೊ ಅಥವಾ ಬ್ಲಾಗ್ ಪೋಸ್ಟನ್ನು ಪ್ರೊಮೊಟ್ ಮಾಡಬಹುದು ಇದರಿಂದ ನಿಮ್ಮ ಚಾನಲ್‌ಗೆ ಹೆಚ್ಚಿನ ವೀಕ್ಷಣೆ ಲಭ್ಯವಾಗುತ್ತದೆ. ನಾನು ಈ ಲೇಖನದಲ್ಲಿ ಇದರ ಸಂಪೂರ್ಣ ವಿವರವನ್ನು ನೀಡುತ್ತಿದ್ದೇನೆ.

ನೀವು ಗೂಗಲ್ ಆ್ಯಡ್‌ವರ್ಡ್ಸ್ ಬಳಸಲು ಮೊದಲು Google Adwords ಅಕೌಂಟ್ ಹೊಂದಿರಬೇಕು. ಅಕೌಂಟ್ ಮಾಡುವುದು ತುಂಬಾ ಸುಲಭ ಅದರ ಬಗ್ಗೆ ಇನ್ನೊಂದು ಲೇಖನ ನಾನು ಬರೆಯುತ್ತೇನೆ. ಈಗ  ಜಾಹಿರಾತು ಮಾಡುವ ವಿಧಾನವನ್ನು ಹಂತ ಹಂತವಾಗಿ ನೋಡೋಣ

ಹಂತ 1: ಮೊದಲು ಗೂಗಲ್ ಆ್ಯಡ್‌ವರ್ಡ್ಸ್ಗೆ ಲಾಗಿನ್ ಆಗಿ ಅಲ್ಲಿ ಒಂದು ಪ್ಲಸ್ ಚಿಹ್ನೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನ್ಯೂ ಕ್ಯಾಂಪೆನ್ ಅನ್ನು ಆಯ್ಕೆ ಮಾಡಿ ಅದರಲ್ಲಿ Create a Campaign without a goals guidance ಅನ್ನು ಆಯ್ಕೆ ಮಾಡಿ ನಂತರ ವಿಡಿಯೋ ವನ್ನು ಆಯ್ಕೆ ಮಾಡಿ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ. ನಂತರ ಕಸ್ಟಮ್ ಕ್ಯಾಂಪೇನ್ ಅನ್ನು ಆಯ್ಕೆ ಮಾಡಿ ಕಂಟಿನ್ಯೂ ಮಾಡಿ.

ಹಂತ 2 : ನಂತರ ಕಾಣಿಸುವ ಪುಟದಲ್ಲಿ Campaign Name ನಲ್ಲಿ ನೀವು ಯಾವ ವಿಡಿಯೋ ಜಾಹಿರಾತು ಮಾಡಲಿದ್ದಿರೋ ಅದರ ಶೀರ್ಷಿಕೆಯನ್ನು ಬರೆಯಬೇಕು. ನಂತರ Bid Strategy ಯಲ್ಲಿ ಎರಡು ಆಯ್ಕೆಗಳಿರುತ್ತವೆ ಅದಲ್ಲಿ Maximum CPV ಯನ್ನು ಆಯ್ಕೆ ಮಾಡಿ ನಂತರ Budget and Date ಸೆಕ್ಷನ್‌ನಲ್ಲಿ ನೀವು ಜಾಹಿರಾತಿಗೆ ನೀಡಬಯಸುವ ಹಣ ಎಷ್ಟು ಎಂಬುದನ್ನು ನಮೂದಿಸಬೇಕು. ಜಾಹಿರಾತಿನ ಮೊತ್ತ ಯಾವುದೇ ಆಗಿರಬಹುದು 100, 200, 500, 1000 ರೂಪಾಯಿಗಳು ಅಥವಾ ಅದಕ್ಕಿಂತಲೂ ಹೆಚ್ಚು ಕೂಡಾ ಇರಬಹುದು ಆದರೆ ನೀವು ನಿಮ್ಮ ಗೂಗಲ್ ಅಕೌಂಟ್‌ಗೆ ರೂ.500ಕ್ಕಿಂತ ಕಡಿಮೆ ಹಣವನ್ನು ಜಮಾ ಮಾಡುವಂತಿಲ್ಲ. ಇದರ ವಿವರ “Tools and Settings” ಆಪ್ಷನ್‌ನ ಬಿಲ್ಲಿಂಗ್‌ನಲ್ಲಿ ಸಿಗುತ್ತದೆ. ನಂತರ ಜಾಹಿರಾತು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ತೋರಿಸಬೇಕು ಎಂಬುದನ್ನು ಆಯ್ಕೆ ಮಾಡಬೇಕು



ಹಂತ 3: ನೆಟ್‌ವರ್ಕ್ ಆಪ್ಷನ್‌ನಲ್ಲಿ ಕೊನೆಯ ಚೆಕ್‌ಬಾಕ್ಸ್ಅನ್ನು ಅನ್‌ಚೆಕ್ ಮಾಡಬೇಕು. ಲೊಕೇಶನ್ ಆಪ್ಷನ್‌ನಲ್ಲಿ ನಿಮ್ಮ ಜಾಹಿರಾತು ಯಾವ ದೇಶದಲ್ಲಿ ಅಥವಾ ರಾಜ್ಯದಲ್ಲಿ ತೋರಿಸಬೇಕು ಎಂಬುವುದನ್ನು ಆಯ್ಕೆ ಮಾಡಬಹುದು. ನಂತರ ನಿಮ್ಮ ವಿಡಿಯೊ ಯಾವ ಭಾಷೆಯಲ್ಲಿದೆ ಅದೇ ಭಾಷೆಯನ್ನು ನೀವು ಆಯ್ಕೆ ಮಾಡಬಹುದು, ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನೀವು ಇಂಗ್ಲಿಷ್ ಭಾಷೆಯನ್ನು ಕೂಡಾ ಇಲ್ಲಿ ಆಯ್ಕೆ ಮಾಡುವುದು ಉತ್ತಮ ಏಕೆಂದರೆ ಅದರಿಂದ ನಿಮ್ಮ ಜಾಹಿರಾತಿನ ರೀಚ್ ಹೆಚ್ಚಾಗತ್ತದೆ.


ಹಂತ 4 : ಇಲ್ಲಿ Inventory Type ಆಪ್ಷನ್‌ನಲ್ಲಿ ಮೂರು ಆಯ್ಕೆಗಳಿರುತ್ತವೆ ಅದರಲ್ಲಿ Standard Inventory  ಆಯ್ಕೆ ಮಾಡಿ.

ಹಂತ 5 : ಅಡಿಶನಲ್ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಡಿವೈಸ್ ಆಪ್ಷನ್ ಇರುತ್ತೆ ನೀವು ನಿಮ್ಮ ಜಾಹಿರಾತನ್ನು ಕೇವಲ ಮೊಬೈಲ್ ಪೋನ್‌ಗಳಲ್ಲಿ ಮಾತ್ರವೇ ತೋರಿಸಬಯಸಿದರೆ ಇಲ್ಲಿ ಎರಡನೇ ಆಯ್ಕೆಗೆ ಕ್ಲಿಕ್ ಮಾಡಿ. ನಾನು ನೋಡಿದ ಪ್ರಕಾರ ಮೊಬೈಲ್‌ನಲ್ಲಿಯೇ ಹೆಚ್ಚಿನ ವೀಕ್ಷಣೆ ದೊರೆಯುವುದು ಆದ್ದರಿಂದ ಮೊಬೈಲ್ ಆಪ್ಷನ್ ಆಯ್ಕೆ ಮಾಡುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ. ಇಲ್ಲಿ ನಿಮಗೆ ಬೇಕಾದ ಡಿವೈಸ್ ನೀವು ಆಯ್ಕೆ ಮಾಡಬಹುದು. ನಂತರದ ಎರಡು ಆಪ್ಷನ್‌ಗಳಲ್ಲಿ ಏನೂ ಆಯ್ಕೆ ಮಾಡಬೇಡಿ.




ಹಂತ 5 : “ಆ್ಯಡ್ ಗ್ರೂಪ್ ನೇಮ್” ಈ ಸೆಕ್ಷನ್‌ನಲ್ಲಿ ನಿಮ್ಮ ಜಾಹಿರಾತಿಗೆ ಒಂದು ಶೀರ್ಷಿಕೆಯನ್ನು ಕೊಡಬೇಕು. ಇದರ ಅಗತ್ಯ ಏನೆಂದರೆ ಒಂದು ಕ್ಯಾಂಪನ್‌ನ ಒಳಗೆ 2-3 ಜಾಹಿರಾತುಗಳನ್ನು ಅಳವಡಿಸಲು ಆಗುತ್ತದೆ ಅದುದರಿಂದ ಪ್ರತೀ ಜಾಹಿರಾತಿಗೆ ಒಂದು ಹೆಸರನ್ನು ನೀಡುವುದು ಉತ್ತಮ.




ಹಂತ 6 : ಡೆಮೊಗ್ರಾಫಿಕ್ ಆಪ್ಷನ್‌ನಲ್ಲಿ ನಿಮ್ಮ ಜಾಹಿರಾತು ನೋಡುವವರು ಯಾರು ಎಂಬುವುದನ್ನು ನೀವು ಆಯ್ಕೆ ಮಾಡಬಹುದು ಅಂದರೆ ಅವರ ವಯಸ್ಸು, ಲಿಂಗ ಹಾಗೂ ಇನ್ನಿತರ ಆಯ್ಕೆಗಳಿರುತ್ತವೆ. ಇದರಲ್ಲಿ ನಿಮಗೆ ಬೇಕಾದ ಆಯ್ಕೆಗಳನ್ನು ಮಾಡಿಕೊಳ್ಳಬೇಕು. ನಂತರ ಆಡಿಯನ್ಸ್ ಆಯ್ಕೆಯಲ್ಲಿ ಕೂಡಾ ನಿಮ್ಮ ವಿಡಿಯೊ ನೋಡುವವರು ಯಾರು ಅವರು ಯಾವ ರೀತಿಯ ವಿಡಿಯೋ ನೋಡುವವರಾಗಿರಬೇಕು ಎಂಬುವುದನ್ನು ಆಯ್ಕೆ ಮಾಡಬಹುದು.


ಹಂತ 7 : Keywords ಇದು ಮುಖ್ಯವಾದ ಭಾಗ ಇಲ್ಲಿ ನಿಮ್ಮ ವಿಡಿಯೋವನ್ನು ಯಾವ ರೀತಿ ಹುಡುಕಬೇಕು ಎಂಬುದನ್ನು ಹೇಳಬೇಕು. ಇಲ್ಲಿ ಸಾಧ್ಯವಾದಷ್ಟು Keyword ಗಳನ್ನು ಸೇರಿಸಿ. Keyword ಗಳನ್ನು ಹುಡುಕಲು ಅನೇಕ ವೆಬ್‌ಸೈಟ್‌ಗಳಿವೆ ಅದರಲ್ಲಿ ನಿಮ್ಮ ವಿಡಿಯೋದ ಹೆಸರನ್ನು ಹಾಕಿ ನಿಮಗೆ ಬೇಕಾದ ಕೀವರ್ಡ್ಸ್ಗಳನ್ನು ಈ ಸೆಕ್ಷನ್‌ನಲ್ಲಿ ಬರೆಯಬೇಕು. ಒಂದು ಮುಖ್ಯವಾದ ಅಂಶ ಕೀವರ್ಡ್ಸ್ ಸೇರಿಸುವಾಗ ಕೊಮಾ ಬಳಸಬಾರದು ಮತ್ತು ಯಾವುದೇ Brand ಅಥವಾ ಕಂಪೆನಿಯ ಹೆಸರನ್ನು ಬರೆಯಬಾರದು.

ಹಂತ 8 : ನಂತರ Scroll ಮಾಡಿ ಬಿಡ್ಡಿಂಗ್ ಆಯ್ಕೆಗೆ ಬನ್ನಿ ಇಲ್ಲಿ ಪ್ರತಿ ಕ್ಲಿಕ್‌ಗೆ ನೀವು ಎಷ್ಟು ರೂಪಾಯಿ ಕೊಡುತ್ತೀರಿ ಎಂಬುವುದನ್ನು ನೀವು ನಮೂದಿಸಬೇಕು. ಹೀಗೆ ನಮೂದಿಸುವಾಗ ಬಲಬದಿಯಲ್ಲಿ ಆ ಬಿಡ್ ಒಕೆ ಆಗುತ್ತಾ ಇಲ್ಲವಾ ಎಂಬುವುದನ್ನು ತೋರಿಸುತ್ತದೆ ಅದರಂತೆ ಬಿಡ್ ಹೆಚ್ಚು ಮಾಡಬೇಕು. ಮೊದಲಿಗೆ 0.10 ರೂಪಾಯಿಯಿಂದ (ಹತ್ತು ಪೈಸೆ) ಶುರು ಮಾಡಿ. 

ಹಂತ 9: ನಂತರ ನಿಮ್ಮ ವಿಡಿಯೋದ ಲಿಂಕ್‌ಅನ್ನು “Your YouTube Video” ಆಪ್ಷನ್‌ನಲ್ಲಿ ಪೇಸ್ಟ್ ಮಾಡಿ. ನಂತರ Video Discovery Ad ಅನ್ನು ಆಯ್ಕೆ ಮಾಡಿ. ನಂತರ ಜಾಹಿರಾತಿನ ಶೀರ್ಷಿಕೆ ಮತ್ತು ವಿವರಗಳನ್ನು ನಮೂದಿಸಬೇಕು. 

ಈ ಎಲ್ಲಾ ಹಂತಗಳು ಆದ ಮೇಲೆ Create Campaign ಗೆ ಕ್ಲಿಕ್ ಮಾಡಿ ನಂತರ ಕಂಟಿನ್ಯೂ ಟು ಕ್ಯಾಂಪೇನ್‌ಗೆ ಕ್ಲಿಕ್ ಮಾಡಿ. ನಿಮ್ಮ ಜಾಹಿರಾತು ಈಗ ರೆಡಿಯಾಗಿದೆ. ಇಲ್ಲಿ ಒಂದು ವಿಷಯವನ್ನು ನಾನು ಹೇಳಬಯಸುತ್ತೇನೆ ನಿಮ್ಮ Campaign Submit ಆದ ನಂತರ ಗೂಗಲ್ ಟೀಂ ನಿಮ್ಮ ಜಾಹಿರಾತನ್ನು ಪರಿಶೀಲಿಸಿ ಅದನ್ನು ಅಪ್ರೂವ್ ಮಾಡುತ್ತಾರೆ. ಇದಕ್ಕಾಗಿ ಕೆಲವೊಂದು ನಿಯಮಗಳಿವೆ ಅದನ್ನು ನೀವು ಓದಿಕೊಳ್ಳಬೇಕಾಗುತ್ತದೆ.  ಜಾಹಿರಾತಿನಲ್ಲಿ ಯಾವುದೇ ಕಂಪನಿ, ಅಥವಾ Brand ಬಗ್ಗೆ ಅವಹೇಳನ ಅಥವಾ ತಪ್ಪು ಮಾಹಿತಿ ನೀಡಿರಬಾರದು. ರಕ್ತ, ಕ್ರೌರ್ಯದ ದೃಶ್ಯಗಳು ಇರಬಾರದು ಇಂತಹ ಅನೇಕ ನಿಯಮಗಳಿಗೆ ಅದರ ಒಂದು ಲಿಂಕ್ ನಾನು ಕೆಳಗೆ ನೀಡಿದ್ದೇನೆ. ಅಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ನಿಮ್ಮ ಜಾಹಿರಾತು ಒಕೆ ಆಗದಿದ್ದಲ್ಲಿ ಏಕೆ ಎಂಬುದನ್ನು ಕೂಡಾ ನಿಮಗೆ ತಿಳಿಸುತ್ತಾರೆ ಮತ್ತು  ಹೆಚ್ಚಿನ ಮಾಹಿತಿಗೆ ನೀವು ಗೂಗಲ್‌ನ ಕಸ್ಟಮರ್ ಸರ್ವಿಸ್ ಅನ್ನು ಸಂಪರ್ಕಿಸುವ ಆಯ್ಕೆ ಇದೆ.


ಜಾಹಿರಾತಿನ ನಿಯಮಗಳ ಬಗ್ಗೆ ಈ ಕೆಳಗಿನ ಲಿಂಕ್‌ನಲ್ಲಿ ನಿಮಗೆ ಮಾಹಿತಿ ಸಿಗುತ್ತದೆ.

https://support.google.com/adspolicy/answer/9338593 


Comments