ಫೇಸ್‌ಬುಕ್ ಯಾ ಫೇಕ್ ಬುಕ್

 



Facebook or Fakebook


ಹಾಯ್,  ಲೇಖನದ ಶೀರ್ಷಿಕೆ ನೋಡಿ ನಾನು ಫೇಸ್ ಬುಕ್ ನ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಹೇಳುತ್ತೆನೆ ಅಂದ್ಕೊಂಡ್ರಾ ?? ಇಲ್ಲಾ ಗೆಳೆಯರೆ, ನಾನು ಕೂಡಾ ಫೇಸ್ ಬುಕ್ ಪ್ರಿಯ, ಆದರೆ ನಾನು ಇಲ್ಲಿ ಹೇಳ ಹೊರಟಿರುವುದು ಫೆಸ್ಬುಕ್ನಲ್ಲಿ ಓಡಾಡುತ್ತಿರುವ ಸುಳ್ಳು  ಸುದ್ಧಿಗಳ ಬಗ್ಗೆ. ಈಗೀಗ ಫೇಸ್ ಬುಕ್ಕನ್ನೇ ದಿನ ಪತ್ರಿಕೆಯಂತೆ ಓದುವ ವರ್ಗವೊಂದಿದೆ. ಅಲ್ಲಿ ಬರುವ ಎಲ್ಲಾ ಸುದ್ಧಿಗಳು ಸತ್ಯ ಎಂದು ನಂಬುವ ಎಷ್ಟೋ ಜನರು ಇದ್ದಾರೆ. ಹಾಗಂತ ನಾವು ಪೇಸ್ ಬುಕ್ಕನ್ನು ದೋಷಿ ಮಾಡುವುದು ಅಷ್ಟೊಂದು ಸರಿ ಅಲ್ಲ ಎನ್ನುವುದು ನನ್ನ ವಿಚಾರ. ನದಿ ನೀರಿನಲ್ಲಿ ಕಸ ತುಂಬಿಕೊಂಡರೆ ಅದರಲ್ಲಿ ನದಿಯ ತಪ್ಪೇನಿದೆ, ಅದು ತನ್ನಷ್ಟಕ್ಕೆ ಹರಿದುಕೊಂಡು ಹೋಗುತ್ತಿರುತ್ತದೆ. ಅದರಲ್ಲಿ ಕಸ ಹಾಕುವವರದು ತಪ್ಪು ಅಲ್ಲವೇ? ಹಾಗೆ ಫೇಸ್ಬುಕ್ ಎಂಬುದು ಕೇವಲ ಒಂದು ಸಾಮಾಜಿಕ ಜಾಲತಾಣ. ಅದರಲ್ಲಿ ಸುಳ್ಳು ಸುದ್ದಿ ಬಿಡುವವರು ಅದನ್ನು ಬಳಸುವವರಲ್ಲವೇ ? ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ, ಆಮೇಲೆ ಪ್ರೈವೆಸಿ ಪಾಲಿಸಿ , ಅದು ಇದೂ ಎಂದು ಸುಮಾರು ವಿಷಯಗಳು ಇವೆ ಅದು ಬಳಕೆದಾರರ ಕೈಯಲ್ಲಿಲ್ಲ ಬಿಡಿ. ಈಗ ನಾನು ಹೇಳುತ್ತಿರುವ ವಿಷಯ ಏನೆಂದರೆ ,ಇತ್ತೀಚೆಗೆ ನನಗೆ ಒಂದು ಸಂದೇಶ ಬಂದಿತ್ತು “ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ ನಿಮಗೆ 10 ರೂಪಾಯಿಗೆ ಸ್ಮಾರ್ಟ್ ಪೋನ್ ಸಿಗುತ್ತೆ” ಎಂಬುದು ಆ ಸಂದೇಶದ ಸಾರಾಂಶವಾಗಿತ್ತು. ಕೆಲವೊಂದು ಜನಪ್ರಿಯ ಕಂಪನಿಗಳ ಹೆಸರುಗಳೂ ಅದರಲ್ಲಿ ಬರೆದ್ದರು.  ಇಂತಹಾ ಸಂದೇಶಗಳು ನಿಮ್ಮ ಮೊಬೈಲ್ ಗೆ ಅಥವಾ ನಿಮ್ಮ ಫೇಸ್ಬುಕ್ ಖಾತೆಗೆ ಬಂದಿರಬಹುದು. ನಾನು ಇಂತಹ ಸಂದೇಶಗಳನ್ನು ತಕ್ಷಣ ಡಿಲೀಟ್ ಮಾಡಿಬಿಡುತ್ತೇನೆ. ತಪ್ಪಿಯೂ ಆ ಲಿಂಕ್ ಗೆ ಕ್ಲಿಕ್ ಆಗಬಾರದು ಎಂಬ ಉದ್ದೇಶದಿಂದ. ನೀವೂ ಕೂಡಾ ಇಂತಹ ಲಿಂಕುಗಳ ಬಗ್ಗೆ ಸ್ವಲ್ವ ಜಾಗೃತೆ ವಹಿಸಿ ಆಯ್ತಾ?? ಒಂದು ಸಣ್ಣ ಕ್ಲಿಕ್ ನಿಮ್ಮ ಜೀವನವನ್ನು ಬದಲಾಯಿಸಬಹುದು 😉 . ಕೇವಲ ಒಂದು ಕ್ಲಿಕ್ ನಿಮ್ಮ ಪೋನ್ ಯಾ ಕಂಪ್ಯೂಟರನ್ನು ಹ್ಯಾಕ್ ಮಾಡಲು ಸಾಕಾಗುತ್ತೆ. ಆ ಲಿಂಕ್ ಹೇಗೆ ಕೆಲಸ ಮಾಡುತ್ತೆ ನಿಮಗೆ ಗೊತ್ತಾ ?? ನಾನು ಹೆಚ್ಚು ಕಡಿಮೆ ಒಂದುವರೆ ವರ್ಷದ ಹಿಂದೆ ಇರಬೇಕು …. ಇಂತಹ ಒಂದು ಲಿಂಕ್ ಕ್ಲಿಕ್ ಮಾಡಿದ್ದೆ. ಅಲ್ಲಿ ಆ ಸಂದೇಶದಲ್ಲಿದ್ದಂತೆ ಮೂವತ್ತು ನಲ್ವತ್ತು ಸಾವಿರದ ಮೊಬೈಲ್ ಫೋನುಗಳು ಅತೀ ಕಡಿಮೆ ದರದಲ್ಲಿ ಅಂದರೆ ಸುಮಾರು 100 ,200 ರೂಪಾಯಿಗಳಿಗೆ ಸಿಗುತ್ತೆ ಎಂದು ತೋರಿಸಲಾಗಿತ್ತು. ಸರಿ ಅಂತ ನಾನು ಒಂದು ಮೊಬೈಲ್  ಆಯ್ಕೆ ಮಾಡಿದೆ, ಎಲ್ಲಾ ಹಂತಗಳು ಮುಗಿದಾಗ ಕೊನೆಯದಾಗಿ ಹಣ ಪಾವತಿಯ ವಿಧಾನಕ್ಕೆ ಬಂದಾಗ ಅಲ್ಲಿ ಒಂದು ಲಿಂಕ್ ಅನ್ನು ಕೊಡಲಾಗಿತ್ತು. ಆ ಲಿಂಕ್ ಅನ್ನು ಇತರರಿಗೆ ಕಳುಹಿಸಿ ಇಷ್ಟು ಜನರಿಗೆ ಕಳುಹಿಸಿ, ಅವರು ಲಿಂಕ್ ಓಪನ್ ಮಾಡಿದರೆ  ನಿಮಗೆ ಮೊಬೈಲ್ ಸಿಗುತ್ತದೆ ಎಂದು ಬರೆದಿತ್ತು. ಅಲ್ಲಿಗೆ ನನಗೆ ಖಾತ್ರಿಯಾಯಿತು ಇದು ಯಾವ ರೀತಿಯ ಜಾಲ ಎಂದು ನಾನು ಅಲ್ಲಿಂದಲೇ ವಾಪಾಸು ಬಂದು ಬಿಟ್ಟೆ. ಇವತ್ತು ಮತ್ತೇ ಅದೇ ಅಂತಹುದೇ ಇನ್ನೊಂದು ಸಂದೇಶ ವಾಟ್ಸ್ಯಾಪ್ ನಲ್ಲಿ ಬಂದಿತ್ತು. ಅದನ್ನು ನೋಡಿ ಈ ಲೇಖನ ಬರೆಯೋಣ ಅನ್ನಿಸಿತು, ಹಾಗೆ ಬರೆಯುತ್ತಾ ಹೋದೆ. ಸುಳ್ಳು ಸುದ್ದಿಗಳು ಅನೇಕ ಮಾದರಿಯಲ್ಲಿ ತಿರುಗುತ್ತಿವೆ. ಇವನ್ನು ಈಗಿನ ಕಾಲದಲ್ಲಿ ಸುಲಭವಾಗಿ ಕಂಡುಹಿಡಿಯ ಬಹುದಾದರೂ ನಾವು ವೇಗದ ಜೀವನಶೈಲಿಗೆ ಹೊಂದಿಕೊಂಡಿದ್ದೇವೆ. ಬಂದ ಸುದ್ದಿ ಸತ್ಯವೋ ಸುಳ್ಳೋ ಎಂದು ವಿಮರ್ಶಿಸದೇ ಅದನ್ನು ಮುಂದೆ ಕಳುಹಿಸುವ ನಡೆ ಅತ್ಯಂತ ಅಪಾಯಕಾರಿ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಎಷ್ಟೋ ಸಂದೇಶಗಳನ್ನು ಪೂರಕ ದಾಖಲೆಗಳಿಲ್ಲದೆ, ಕೇವಲ ಒಂದು ಪೋಸ್ಟರಿನಲ್ಲಿ ಬರೆದು ಅದನ್ನು ಕಳುಹಿಸಿ ಬಿಟ್ಟಿರುತ್ತಾರೆ. ಈ ರೀತಿ ಸುದ್ದಿಗಳನ್ನು ಯಾರು ಬೇಕಾದರೂ ಬರೆದು ಹಾಕಬಹುದು ಎಂಬ ಪ್ರಜ್ಞೆ ನಮ್ಮಲ್ಲಿ ಬಂದರೆ ಸಾಕು ಸುಳ್ಳು ಸುದ್ದಿಗಳನ್ನು ತಡೆಯುವ 30 ಪ್ರತಿಶತ ಕೆಲಸ ಅಲ್ಲೇ ಆಗಿ ಹೋಗುತ್ತದೆ.

Social Media

   ಫೇಸ್ ಬುಕ್ ದೂರದಲ್ಲಿರುವ ನಮ್ಮ ಗೆಳೆಯರು, ಆತ್ಮೀಯರು, ಸಂಬಂಧಿಕರನ್ನು ತಲುಪಲು ಅವರೊಂದಿಗೆ ಸಂಪರ್ಕದಲ್ಲಿರಲು ಇರವುದೇ ಹೊರತು ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಅಶಾಂತಿ ಹಬ್ಬಿಸಲು ಅಲ್ಲ. ಜವಾಬ್ದಾರಿಯುತ ನಾಗರಿಕರಾದ ನಾವು ಸಾಮಾಜಿಕ ಜಾಲತಾಣವನ್ನು ಧನಾತ್ಮಕತೆಯನ್ನು ಹರಡಲು ಉಪಯೋಗಿಸೋಣ ಒ.ಕೆ..ನಾ???

ನಿಮ್ಮ

ಕೆ.ಪಿ.

Photo by Wilfred Iven from StockSnap
Photo by Sara Kurfeß on Unsplash

Comments